📚 What is Vedanta?
Seeker: I’ve heard a lot about Vedanta. But what exactly is it?
Guru: Vedanta is more than philosophy. It’s the valid means of realizing the Self.
Seeker: But isn’t the Self already within me?
Guru: Yes, but ignorance creates the illusion of separation.
ನಮಸ್ತೆ ಗುರೂಜಿ ,
ReplyDelete"ವರ್ಣಾಶ್ರಮ ವ್ಯವಸ್ಥೆ " ಲೇಖನ ಅತ್ಯದ್ಭುತ ವಾಗಿದೆ. ನೀವು ತಿಳಿಸಿರುವ ಹಾಗೆ ನಿಮ್ಮ ' ಪುರುಷಾರ್ಥಗಳು' ಮತ್ತು 'ಶಾಸ್ತ್ರಗಳು ' ಸಂಚಿಕೆಗಳು ಪೂರಕವಾಗಿದೆ . ಶ್ರೀ ಕೃಷ್ಣನ 'ಚಾತುರ್ವರ್ಣ ' ವನ್ನು ತಪ್ಪಾಗಿ ಅರ್ಥೈಸಿ ಕೊಂಡಿರುವ ಜನರಿಗೆ, ಹಿಡಿದ ಕನ್ನಡಿಯಾಗಿದೆ . ಒಬ್ಬನೇ ಮನುಷ್ಯ , ಒಂದೇ ದಿನದಲ್ಲಿ , ಅವನು ಮಾಡುವ ಕರ್ಮಗಳಿಂದ ಅಥವಾ ಮನಸ್ಸಿನ ಆಲೋಚನೆಗಳಿಂದ ಆಗಲೀ ಗುಣ ಬ್ರಾಹ್ಮಣ, ಗುಣ ಕ್ಷತ್ರಿಯ, ಗುಣ ವೈಶ್ಯ , ಗುಣ ಶೂದ್ರ ಆಗಿರುತ್ತಾನೆ , ಎಂದು ನನ್ನ ಅನಿಸಿಕೆ.
ಹಾಗೆಯೇ, ಮನುಷ್ಯ ಒಂದು ದಿನದಲ್ಲಿ ಮಾನಸಿಕವಾಗಿ ಬಾಲ್ಯ , ಗೃಹಸ್ಥ , ಏಕಾಂಗಿ ಹಾಗೂ ಸನ್ಯಾಸ ಎಲ್ಲವನ್ನೂ ಅನುಭವಿಸಬಹುದು .
ಮಾನವ ಜನ್ಮದ ಉದ್ದೇಶ ಸಾರ್ಥಕವಾಗಬೇಕಾದರೆ ಜ್ಞಾನಮಾರ್ಗ ಒಂದೇ ಸೂಕ್ತವಾದುದು .ಜ್ಞಾನಾಭಿವೃದ್ಧಿ ಮಾಡಿಕೊಂಡು ಮುಮುಕ್ಷುವಾಗಿ ಮೋಕ್ಷಪಥವನ್ನು ಅನುಸರಿಸಬೇಕಾದರೆ , ಮನುಷ್ಯ ಹೆಚ್ಚು ಹೆಚ್ಚು ಸಾತ್ವಿಕನಾಗುವುದು ಅಗತ್ಯ.
ಸಾತ್ವಿಕರಾಗಬೇಕೆಂಬ ಆಶಯ ಹಾಗೂ ಹಂಬಲವನ್ನು ವೃದ್ಧಿ ಗೊಳಿಸುತ್ತಿರುವ ನಿಮಗೆ
ಅನಂತಾನಂತ ಹೃತ್ಪೂರ್ವಕ ವಂದನೆಗಳು ಹಾಗೂ ಧನ್ಯವಾದ ಗಳು 🙏🙏🙏