In the ancient kingdom of Videha, ruled by the noble King Janaka, a grand yajña was once performed. The air was thick with the scent of incense and the chants of ṛṣis as the sacred fire blazed in the ceremonial ground. Though King Janaka was endowed with immense wealth and power, he was inwardly a seeker of Truth, a ruler who valued wisdom above worldly splendor. When the rituals concluded, he addressed the assembly of scholars, ṛṣis, and brahmavādins, announcing that a thousand cows, each with gold-adorned horns, would be gifted to the greatest knower of Brahman among them. A hush fell across the assembly. Learned men and women exchanged glances, yet none dared claim such a title. The prize was great, but the claim it demanded - recognition as the supreme knower of the Self - was even greater.
🔍 Search This Blog
🌍 Translate
ಭಜಗೋವಿಂದಂ - ಶ್ಲೋಕ - 12 (Bhajagovindam - Sloka 12)
ಭಜಗೋವಿಂದಮ್ ಗ್ರಂಥದಲ್ಲಿ ಆದಿ ಶಂಕರಾಚಾರ್ಯರು ಸಾಧಕರಲ್ಲಿ ಅಡಗಿರುವ ಪ್ರತಿಯೊಂದು ತಪ್ಪು ತಿಳುವಳಿಕೆಗಳನ್ನು ಮತ್ತು ಮೋಹಗಳನ್ನು ಮುದ್ಗರದಿಂದ ಪ್ರಹರಿಸಿ ತುಂಡುತುಂಡು ಮಾಡುತ್ತಿದ್ದಾರೆ. ಧನ-ಜನ-ಯೌವ್ವನದ ಗರ್ವಪಡದೆ, ಮಾಯಾಮಯವಾದ ಜಗತ್ತಿಗೆ ಅಂಟಿಕೊಳ್ಳದೆ, ಬ್ರಹ್ಮಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ಹಿಂದಿನ ಶ್ಲೋಕದಲ್ಲಿ ಉಪದೇಶಿಸಿದ್ದರು. ತಮ್ಮ ಉಪದೇಶದ ಉಪಸಂಹಾರವೆಂಬಂತೆ ಪ್ರಸ್ತುತ ಶ್ಲೋಕವನ್ನು ಹೇಳುತ್ತಿದ್ದಾರೆ.
ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ
ಪುನರಾಯಾತಃ ।
ಕಾಲಃ
ಕ್ರೀಡತಿ ಗಚ್ಛತ್ಯಾಯುಃ
ತದಪಿ
ನ ಮುಂಚತ್ಯಾಶಾವಾಯುಃ ॥12||
ಉಪನಿಷತ್ತಿನ ಕಥೆಗಳು - ಸಾರ್ಥಕ ಜೀವನಕ್ಕೆ ದಾರಿದೀಪಗಳು - 12: ಯಾಜ್ಞವಲ್ಕ್ಯ ಮತ್ತು ಜನಕ
ಜನಕನು ಆಯೋಜಿಸಿದ್ದ ಯಜ್ಞದಲ್ಲಿ "ಬ್ರಹ್ಮವಿತ್ತಮ ಯಾರು?", ಎಂಬ ಪರೀಕ್ಷೆಯಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ದಿಗ್ವಿಜಯ ಸಾಧಿಸಿದ ರೋಚಕ ಕಥೆ ನಮಗೆಲ್ಲಾ ತಿಳಿದೇ ಇದೆ(ಹಿಂದಿನ ಅಂಕಣವನ್ನು ನೋಡಿ). ಜನಕನು ಈ ಪರೀಕ್ಷೆಯನ್ನು ಆಯೋಜಿಸಿದ ಉದ್ದೇಶವೇ ಬ್ರಹ್ಮಜ್ಞಾನಿ ಯಾರೆಂದು ತಿಳಿದು, ಅವರನ್ನು ಅರಸಿ, ಬ್ರಹ್ಮಜ್ಞಾನದ ವಿಚಾರವಾಗಿ ಉಪದೇಶ ಪಡೆಯುವುದಾಗಿತ್ತು. ಯಾಜ್ಞವಲ್ಕ್ಯರ ವಿಜಯದ ನಂತರ ಜನಕ - ಯಾಜ್ಞವಲ್ಕ್ಯರ ನಡುವೆ ಸಂಭಾಷಣೆಗಳು ಹೆಚ್ಚುತ್ತಾ, ಸಂಬಂಧ ಗಾಢವಾಗುತ್ತಾ ಬಂತು. ಅವರ ನಡುವೆ ನಡೆದ ಸಂವಾದಗಳು ಹಲವು ವೈದಿಕ ಹಾಗೂ ಜಾನಪದ ಗ್ರಂಥಗಳಲ್ಲಿ ದಾಖಲಾಗಿವೆ.
Upanishad Stories - Winning Over Inner Enemies - 10: The Story of Satyakāma Jābāla and Upakosala
It is a well-known story that Satyakāma Jābāla attained realization of Truth (Tattva Sākṣātkāra) through his unwavering commitment to truth, humility, devoted service to his Guru, and diligent practices like śravaṇa (listening), manana (contemplation), and other spiritual disciplines. Inspired by his Guru Gautama, after completing his studies, Satyakāma entered the gṛhasthāśrama (householder stage) and established a gurukula, becoming an ācārya who spread Vedic knowledge.
Such was his immense knowledge and creative teaching style that his fame spread far and wide, and eager seekers from various kingdoms joined his gurukula for learning. Alongside Vedic studies, worldly subjects like sciences were also taught. Students participated in all daily chores - managing the cowshed, agriculture, cleanliness, cooking in the kitchen, and serving guests - thus gaining life skills and inner purity (citta-śuddhi) through their dedicated contribution.
ಭಜಗೋವಿಂದಂ - ಶ್ಲೋಕ - 11 (Bhajagovindam - Sloka 11)
ಸಂಸಾರಚಕ್ರದಲ್ಲಿ ಬಿದ್ದು ನರಳಾಡುತ್ತಿರುವ ಜೀವಿಗಳನ್ನುದ್ದೇಶಿಸಿ, ಆಚಾರ್ಯ ಶಂಕರರು ಕನಿಕರದಿಂದ ಮೊಕ್ಷೋಪಾಯವನ್ನು ಉಪದೇಶಿಸಿರುವ ಸ್ತೋತ್ರರೀತಿಯ ವೇದಾಂತ ಪ್ರಕರಣ ಗ್ರಂಥವೇ ಭಜಗೋವಿಂದಮ್. ನಮ್ಮಲ್ಲಿ ಅನಾದಿಕಾಲದಿಂದಲೂ ಅಡಕವಾಗಿರುವ ಅವಿದ್ಯೆಯನ್ನು ನಾಶಮಾಡುವ ಆತ್ಮಜ್ಞಾನವೊಂದೇ ಮೋಕ್ಷಸಾಧನ ಎಂಬುದು ವೇದಾಂತ ಡಿಂಡಿಮ. ಈ ಮಾರ್ಗದಲ್ಲಿ ಬಂದೊದಗಬಹುದಾದ ಮೋಹಗಳನ್ನು, ಅದರಿಂದ ಹೊರಬರುವ ವಿಧಾನವನ್ನು ಮತ್ತು ಆತ್ಮಜ್ಞಾನವನ್ನು ಪಡೆಯುವ ಪರಿಯನ್ನು ಇಲ್ಲಿಯವರೆಗೆ ತಿಳಿಸಿದ್ದಾರೆ. ಇಷ್ಟೆಲ್ಲಾ ತಿಳಿದಿದ್ದರೂ ನಮ್ಮ ಪ್ರಯತ್ನಗಳು ಹಲವು ಬಾರಿ ವಿಫಲವಾಗುವುದರ ಕಾರಣ ಜಗತ್ತಿನ ವಸ್ತು-ವಿಷಯಗಳ ಮೇಲಿರುವ ಸಂಗ(ಅಂಟು). ನಾವೆಲ್ಲರೂ ಈ ಅಂಟಿನ ನಂಟನ್ನು ಬಿಡಿಸಿಕೊಂಡು ಮೋಕ್ಷಸ್ವರೂಪದಲ್ಲಿ ನೆಲೆನಿಲ್ಲಬೇಕೆಂಬ ಆಶಯದಿಂದ ಶಂಕರರು ಹೀಗೆ ಉಪದೇಶಿಸುತ್ತಿದ್ದಾರೆ.
ಮಾ ಕುರು ಧನ-ಜನ-ಯೌವನ-ಗರ್ವಂ
ಹರತಿ
ನಿಮೇಷಾತ್ಕಾಲಃ ಸರ್ವಮ್ ।
ಮಾಯಾಮಯಮಿದಮಖಿಲಂ
ಹಿತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ ॥ 11 ||
ವೇದಾಂತ ಪರಿಚಯ - ಭಾಗ 3 - ವರ್ಣಾಶ್ರಮ ವ್ಯವಸ್ಥೆ
ಮಾನವನ ಸಮಗ್ರ ಅಭಿವೃದ್ಧಿಗಾಗಿ ಶಾಸ್ತ್ರಗಳು ಪುರುಷಾರ್ಥಗಳ ಸಾಧನೆಯನ್ನು ‘ವರ್ಣ’ ಮತ್ತು ‘ಆಶ್ರಮ’ ವ್ಯವಸ್ಥೆಗಳ ಮೂಲಕ ಸುವ್ಯವಸ್ಥಿತವಾಗಿ ನಿರ್ದೇಶಿಸಿದೆ. ವೇದಗಳು ಆಶ್ರಮ ವ್ಯವಸ್ಥೆಯನ್ನು ವ್ಯಕ್ತಿಯ ಸ್ವಹಿತಾಸಕ್ತಿ, ಸರ್ವತೋಮುಖ ಬೆಳವಣಿಗೆ ಮತ್ತು ಮನಃಶಾಂತಿಯ ಪ್ರಾಪ್ತಿಗಾಗಿ ನೀಡಿದ್ದರೆ, ವರ್ಣ ವ್ಯವಸ್ಥೆಯನ್ನು ಸಾಮಾಜಿಕ ಸಮತೋಲನ ಮತ್ತು ಸಮೃದ್ಧಿಯ ಉದ್ದೇಶದಿಂದ ನೀಡಿವೆ. ಇವೆರಡರ ಸಮೂಹವನ್ನು ’ವರ್ಣಾಶ್ರಮ ವ್ಯವಸ್ಥೆ’ ಎನ್ನುತ್ತಾರೆ. ಹಲವರು ತಮ್ಮ ಕುಟುಂಬಕ್ಕಷ್ಟೇ ಸೀಮಿತವಾದ ಸ್ವಾರ್ಥಜೀವನ ನಡೆಸುತ್ತಾ ಸಮಾಜವನ್ನು ನಿರ್ಲಕ್ಷಿಸಿದರೆ, ಇನ್ನೂ ಕೆಲವರು ಸಮಾಜಸೇವೆಯ ಹೆಸರಿನಲ್ಲಿ ತಮ್ಮ ಪರಿವಾರವನ್ನು ಕಡೆಗಣಿಸುತ್ತಾರೆ. ಆದರೆ ಆಶ್ರಮ ಹಾಗು ವರ್ಣ ವ್ಯವಸ್ಥೆಗಳು, ವ್ಯಕ್ತಿಯ ಹಿತ(ವ್ಯಷ್ಟಿ) ಹಾಗು ಸಮಾಜದ ಅಭಿವೃದ್ಧಿಯನ್ನು (ಸಮಷ್ಟಿ) ಸಮತೋಲನಗೊಳಿಸುವ ರಕ್ಷಣಾವ್ಯವಸ್ಥೆಯಾಗಿದೆ.
ಭಜಗೋವಿಂದಂ - ಶ್ಲೋಕ - 10 (Bhajagovindam - Sloka 10)
ಶಂಕರಾಚಾರ್ಯರು ಭಜಗೋವಿಂದಮ್ ಗ್ರಂಥದಲ್ಲಿ ಒಬ್ಬ ವ್ಯಕ್ತಿಯಲ್ಲಿರುವ ವಿವಿಧ ಮೋಹಗಳನ್ನು ಮುದ್ಗರದಿಂದ ನಾಶಗೊಳಿಸಿ, ಮೋಕ್ಷದೆಡೆಗೆ ಸಾಗುವ ಉಪದೇಶವನ್ನು ನೀಡುತ್ತಿದ್ದಾರೆ. ಶ್ರೀಕೃಷ್ಣ, "ಧ್ಯಾಯತೋ ವಿಷಯಾನ್ ಪುಂಸ:..||" (ಗೀತೆ 2.62-63) ವ್ಯಕ್ತಿಯ ಅಧ:ಪತನದ ಹಾದಿಯನ್ನು ಎಚ್ಚರಿಕೆ ಗಂಟೆಯಂತೆ ಉಪದೇಶಿಸಿದರೆ(Ladder of fall), ಶಂಕರಾಚಾರ್ಯರು ಹಿಂದಿನ ಶ್ಲೋಕದಲ್ಲಿ, "ಸತ್ಸಂಗತ್ವೇ ನಿಸ್ಸಂಗತ್ವಂ..||" (ಭ.ಗೋ 9) ವ್ಯಕ್ತಿಯನ್ನು ಜೀವನ್ಮುಕ್ತಿಗೆ ಕರೆದೊಯ್ಯುವ ಏಣಿಯನ್ನು (Ladder of Rise) ತೋರಿಸಿಕೊಟ್ಟು ಪ್ರೇರೇಪಿಸಿದ್ದಾರೆ. ಜೀವನ್ಮುಕ್ತಿಯಿಂದ ಗಳಿಸುವುದಾದರೂ ಏನು? ಎಂದು ಪ್ರಶ್ನಿಸಿದರೆ ಸಂಸಾರನಿವೃತ್ತಿ. ಸಂಸಾರ ಎಂದರೆ ಕನ್ನಡ ಭಾಷೆಯಲ್ಲಿ ಉಪಯೋಗಿಸುವ ಕುಟುಂಬ ಎಂಬ ಅರ್ಥವೆಂದು ಭಾವಿಸದೇ, ಜನನ-ಮರಣಚಕ್ರವೆಂದು ತಿಳಿಯುವುದು ಸೂಕ್ತ. ಸಂಸಾರನಿವೃತ್ತಿರೂಪವಾದ ಮೋಕ್ಷ ಎಂದರೆ ಈ ಚಕ್ರದಿಂದ ಬಿಡುಗಡೆ ಎಂಬುದು ಎಲ್ಲ ಆಸ್ತಿಕರ ನಂಬಿಕೆ. ವ್ಯಕ್ತಿಯು ಮೋಕ್ಷಸಾಧನೆಯಿಂದ ಆತ್ಯಂತಿಕ ದುಃಖನಿವೃತ್ತಿ ಮತ್ತು ಪರಮಾನಂದಪ್ರಾಪ್ತಿಯನ್ನು ಗಳಿಸುತ್ತಾನೆ ಎಂಬುದು ಸರ್ವಶಾಸ್ತ್ರಗಳ ಉದ್ಘೋಷ.