ಹಿಂದಿನ ಅಂಕಣದಲ್ಲಿ, ಮೋಹವನ್ನು ಅಂಕಣದಲ್ಲಿ, ಧನದ ಮೇಲಿರುವ ಹೋಗಲಾಡಿಸುವ ಬಗೆಯನ್ನು ತಿಳಿದುಕೊಂಡೆವು. ಸ್ವಂತ ಪರಿಶ್ರಮದಿಂದ ಧನವನ್ನು ಸಂಪಾದಿಸಿ. ಧನವನ್ನು ದಾನಧರ್ಮಕಾರ್ಯಕ್ಕೆ ನಿಯೋಜಿಸುವ ಮೂಲಕ ಸುಖವನ್ನು ಅನುಭವಿಸಬೇಕೆಂಬ ಉಪದೇಶಕ್ರಮ ಅತುಲ್ಯವಾದುದು. ಹಣವಿರುವುದು ಜೀವನನಿರ್ವಹಣೆಗೆ ಹಾಗಾದರೆ ಜೀವನವಿರುವುದು ಯಾವ ಉದ್ದೇಶಕ್ಕಾಗಿ? ಧನಸಂಪಾದನೆಗಾಗಿಯೇ? ಮನುಷ್ಯನ ಜೀವನವಿರುವುದು ಮೋಕ್ಷಸಾಧನೆಗಾಗಿ. ಮೋಕ್ಷಧೇಯವನ್ನಿಟ್ಟುಕೊಂಡವರಿಗೆ ಈ ಮಾರ್ಗದಲ್ಲಿ ಬರಬಹುದಾದ ಮೋಹಗಳನ್ನೆಲ್ಲ ನಾಶಮಾಡುವ ವಿಧಾನವನ್ನು ಶಂಕರಾಚಾರ್ಯರು ಪ್ರಸ್ತುತಗ್ರಂಥದಲ್ಲಿ ತಿಳಿಸುತ್ತಿದ್ದಾರೆ. ಮೂರನೇ ಶ್ಲೋಕದಲ್ಲಿ ಮಾನವರಲ್ಲಿ ಕಾಣುವ ಸ್ತ್ರೀ-ಪುರುಷ ಇಚ್ಛೆ - ಕಾಮದ ಮೋಹವನ್ನು ಹೋಗಲಾಡಿಸಲು -
ನಾರೀಸ್ತನಭರ-ನಾಭೀದೇಶಂ
ದೃಷ್ಟಾ
ಮಾ ಗಾ ಮೋಹಾವೇಶಮ್ |
ಏತನ್ಮಾಂಸವಸಾದಿವಿಕಾರಂ
ಮನಸಿ
ವಿಚಿಂತಯ ವಾರಂ ವಾರಮ್ || 3 |
ಇಂದಿನ
ಮಾಧ್ಯಮ, ತಂತ್ರಜ್ಞಾನದ ದುಷ್ಟಭಾವದಿಂದಾಗಿ ಯುವಕರಿಗೆ ಈ ವಿಚಾರವಾಗಿ ಸರಿಯಾದ ಮಾರ್ಗದರ್ಶನ ದೊರೆಯದಂತಾಗಿದೆ. ಕಾಮೋದ್ರೇಕವನ್ನು ನಿಯಂತ್ರಣ ಮಾಡದ ಮನುಷ್ಯರೂಪಿ ಪ್ರಾಣಿಗಳನ್ನು
ನಾವು ಸಮಾಜದಲ್ಲಿ ಕಾಣುತ್ತಿಲ್ಲವೇ? ಆದ್ದರಿಂದ ಸ್ತ್ರೀ-ಪುರುಷ ಆಕರ್ಷಣೆಯ ಬಗ್ಗೆ ಸರಿಯಾಗಿ ವಿಚಾರಮಾಡುವುದು ಅವಶ್ಯಕ. ಭಾರತೀಯ ಶಾಸ್ತ್ರಪರಂಪರೆ ಯಾವುದೇ ಸಂಕೋಚವಿಲ್ಲದೇ ಕಾಮದ ಮೂಲಕಾರಣ, ಪರಿಣಾಮ
ಹಾಗೂ ಅದರ ಸಮರ್ಥ ನಿರ್ವಹಣೆಯನ್ನೂ
ತಿಳಿಸಿದೆ.
ಜೀವಿಯು
ತನ್ನ ಪರಿಪೂರ್ಣತೆಯನ್ನು ತನ್ನಲ್ಲಿ ಕಂಡುಕೊಳ್ಳದೇ ಹೊರಗಿನ ವಸ್ತುಗಳನ್ನು ಅಥವಾ ವ್ಯಕ್ತಿಗಳನ್ನು ಉಪಭೋಗಿಸುವುದರಿಂದ
ಪೂರ್ಣ- ನಾಗುವೆನೆಂಬ ಭ್ರಾಂತಿಯೇ ಕಾಮಕ್ಕೆ ಮೂಲಕಾರಣ. ಕಾಮ ಎಂದರೆ ಬಯಕೆ.
ಅದರಲ್ಲಿ ಎರಡು ವಿಧ.
(1) ಸ್ವಾಭಾವಿಕ
ಕಾಮ ಸಾರ್ವತ್ರಿಕವಾಗಿ, ನೈಸರ್ಗಿಕವಾಗಿ, ಸಹಜವಾಗಿ ಎಲ್ಲರಲ್ಲೂ ಇರುವ ಬಯಕೆಗಳು
(2) ಆಗಂತುಕ
ಕಾಮ ಮನುಷ್ಯ ತಾನೇ ಬೇಕೆಂದು ಸ್ವಾಧೀನಪಡಿಸಿಕೊಳ್ಳುವ
ಬಯಕೆಗಳು. ಇದು ವ್ಯಕ್ತಿಯಿಂದ ವ್ಯಕ್ತಿಗೆ,
ಕಾಲಾನುಕ್ರಮದಲ್ಲಿ ಬದಲಾಗುವ ಬಯಕೆಗಳು
ಈ ಎರಡರಲ್ಲಿ ಆಗಂತುಕ ಕಾಮವನ್ನು ಯಾವುದೇ ಸಂದರ್ಭದಲ್ಲಾದರೂ ಬೆಳೆಸಿಕೊಳ್ಳಬಹುದು ಹಾಗೇ ಪೂರ್ಣವಾಗಿ ತ್ಯಜಿಸಲೂಬಹುದು.
ಆದರೆ, ಸ್ವಾಭಾವಿಕ ಕಾಮವನ್ನು ಸಮರ್ಥವಾಗಿ ನಿರ್ವಹಿಸಬೇಕಷ್ಟೇ. ಸ್ತ್ರೀ-ಪುರುಷರ ನಡುವಿನ ಪರಸ್ಪರ ಆಕರ್ಷಣೆ ಸ್ವಾಭಾವಿಕ ಕಾಮವೆಂಬುದನ್ನು ಅರಿಯುವುದು, ಈ ಮಾರ್ಗದಲ್ಲಿ ಮೊದಲ
ಹೆಜ್ಜೆ. ಅದರ ಇರುವಿಕೆಯನ್ನು ಪ್ರಶ್ನಿಸುವುದು
ಮೂರ್ಖತನ ಮತ್ತು ಅದರ ಅಸ್ತಿತ್ವಕ್ಕೆ (ಇರುವಿಕೆಗೆ)
ನಾವು ವೈಯಕ್ತಿಕವಾಗಿ ಹೊಣೆಗಾರರಲ್ಲ
ಎಂದು ತಿಳಿದುಕೊಳ್ಳುವುದು ನೆಮ್ಮದಿತರುವ
ವಿಚಾರ. ಆದರೆ ಕಾಮಚಿಂತನೆಯನ್ನು ಸಕ್ರಿಯಗೊಳಿಸುವುದು,
ಪೋಷಿಸುವುದು, ಉತ್ತೇಜಿಸುವುದು ಬೇಕೋ ಬೇಡವೋ ಎಂಬುದು ನಮ್ಮ ಕೈಯಲ್ಲಿದೆ. ವಿಚಾರಹೀನರಾಗಿ ಅತಿಯಾಗಿ
ಕಾಮಭೋಗದಲ್ಲಿ ತೊಡಗಿದರೆ ಆಗುವ ದುಷ್ಪರಿಣಾಮಗಳು ಒಂದೇ ಎರಡೇ?
* ದೈಹಿಕವಾಗಿ
ಕುಗ್ಗುವುದು ಸರ್ವೇಂದ್ರಿಯಾಣಾಂ ಜರಯಂತಿ ತೇಜಃ | (ಕಠೋಪನಿಷತ್)
* ಕೌಟುಂಬಿಕ
ಜೀವನ ಉದ್ದೇಶರಹಿತವಾಗುವುದು.
* ಸಮಾಜದಲ್ಲಿ
ವ್ಯಭಿಚಾರ, ಅನಾಚಾರ ಮತ್ತು ಹದಿಹರೆಯದ ವಯಸ್ಸಿನಲ್ಲೇ ಗರ್ಭಧಾರಣೆ ಹೆಚ್ಚಾಗುವುದು.
* ಸಾಂಸ್ಕೃತಿಕ
ಜೀವನಪದ್ಧತಿ ಕಣ್ಮರೆಯಾಗಿ ವಿಕೃತ ಪರಂಪರೆಯ ಅಟ್ಟಹಾಸವಾಗುವುದು.
* ಆಧ್ಯಾತ್ಮಿಕ
ಪತನವಾಗುವುದು.
ನಮ್ಮ ಇತಿಹಾಸ,
ಪುರಾಣಗಳಲ್ಲಿ ಹಲವು ಕಥೆಗಳು ಕಾಮದ ದುಷ್ಪರಿಣಾಮವನ್ನು ಮನದಟ್ಟು ಮಾಡಿಸಲೆಂದೇ ಇರುವುದು.
ನಾರೀಸ್ತನಭರ-ನಾಭೀದೇಶಮ್:
ನಾರಿಯ ದೇಹದ ಅಂಗಾಂಗಗಳನ್ನು ಕಾಮಭಾವದಿಂದ ನೋಡುವುದು. ಇಲ್ಲಿ ಪುರುಷನಿಗೆ ಉದ್ದೇಶಿಸಿ ಉಪದೇಶಿಸಿದ್ದರೂ,
ಇದು ಸ್ತ್ರೀಯರಿಗೂ ಅನ್ವಯವೆಂಬುದು ಉಪಲಕ್ಷಿತ.
ದೃಷ್ಟಾ ಮಾ ಗಾ
ಮೋಹಾವೇಶಮ್ : ದೈಹಿಕ ಆಕರ್ಷಣೆಯಿಂದ ಮೋಹದ ಹೊಡೆತಕ್ಕೆ ಒಳಗಾಗಬೇಡ. ಈ ಹೊಡೆತಕ್ಕೆ ಬೀಳದೆ ಜೀವನ ನಡೆಸಲು
ಮಾರ್ಗಗಳು ಹಲವು -
(1) ಆಶ್ರಮಧರ್ಮಪಾಲನೆ
- ಸ್ತ್ರೀ-ಪುರುಷರ ಆಕರ್ಷಣೆ ಸ್ವಾಭಾವಿಕ ಕಾಮವೆಂದು ತಿಳಿದು, ಕಾಮಚಿಂತನೆಯನ್ನು ಸಕ್ರಿಯಗೊಳಿಸಬೇಕೋ
ಬೇಡವೋ? ಪೋಷಿಸಬೇಕೋ ಬೇಡವೋ? ಎಂದು ವಿವೇಕಪೂರ್ಣವಾಗಿ ವಿಚಾರಮಾಡುವುದು. ಜೀವನದಲ್ಲಿ ಈ ಕಾಮವನ್ನು ಪರಿಪೂರ್ಣವಾಗಿ ಸಚೇತನಗೊಳಿಸುವುದಿಲ್ಲವೆಂದು
ನಿಶ್ಚಯಿಸಿದವರು ನೈಷ್ಟಿಕ ಬ್ರಹ್ಮಚರ್ಯವನ್ನು ಅಥವಾ ಸಂನ್ಯಾಸಧರ್ಮವನ್ನು ಪಾಲಿಸಬಹುದು. ಉಳಿದವರು
ಗೃಹಸ್ಥಾಶ್ರಮವನ್ನು ಪ್ರವೇಶಿಸಿ, ನೈತಿಕವಾಗಿ ತಮ್ಮ ಸತಿ-ಪತಿಯರೊಂದಿಗೆ, ಮಿತವಾಗಿ, ಮರ್ಯಾದಾಚೌಕಟ್ಟನ್ನು
ಮೀರದೆಯೇ ಕಾಮವನ್ನು ಉಪಭೋಗಿಸಿ ಸಮಾಜಕ್ಕೆ ಸತ್ಸಂತಾನವನ್ನು ನೀಡಬಹುದು. ಧರ್ಮಕ್ಕೆ ಅವಿರುದ್ಧವಾದ
ಕಾಮವೂ ಭಗವಂತನ ವಿಭೂತಿಯೇ. (ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ - ಭಗವದ್ಗೀತೆ)
2) ನಿಯಂತ್ರಿತಜೀವನ
ನಿಯಂತ್ರಣವಿರುವುದು ಕಾಮೋಪಭೋಗದಲ್ಲೂ ಉತ್ತಮ. ನಿಯಂತ್ರಣವನ್ನು ಸಾಧಿಸಲು ಉಪಾಯಗಳು
* ವಿಷಯಸುಖೇ ದೋಷದರ್ಶನಮ್ - ಕಾಮಸುಖದಲ್ಲಿರುವ ದೋಷಗಳಾದ ಕ್ಷಣಿಕತೆ, ತೀರದ ಬಯಕೆ ಮತ್ತು ಬಂಧಕತೆಯನ್ನುಕಾಣುವುದು
* ದುಷ್ಪರಿಣಾಮಚಿಂತನಮ್
- ಈ ಚಟಕ್ಕೆ ಸಿಲುಕಿಕೊಂಡು ಅನೈತಿಕ ಮಾರ್ಗದಲ್ಲಿ ನಡೆಯುವುದು, ಇಂದ್ರಿಯಗಳ ಶಕ್ತಿ ಕುಗ್ಗುವುದು,
ಬುದ್ಧಿಗೆ ಮಂಕು ಕವಿಯುವುದು ಮತ್ತು ಮನಸ್ಸು ರಾಮದಾಸನಾಗುವ ಬದಲು ಕಾಮದಾಸನಾಗಿ ಮನುಷ್ಯ ಜನ್ಮವೇ ಪರಿಣಾಮಗಳನ್ನು
ಸದಾ ಚಿಂತಿಸುವುದು.
* ಶಕ್ತಿಸಂಚಯಮ್
- ವ್ಯರ್ಥವಾಗುವ ದುಷ್ಟ ನಮ್ಮಲ್ಲಿರುವ ವೀರ್ಯವನ್ನು ಪೋಲುಮಾಡದೆ ಆಧ್ಯಾತ್ಮಿಕ ಸಾಧನೆಯ ಮೂಲಕ ಓಜಸ್ಸಾಗಿ
ಪರಿವರ್ತಿಸಿ, ಓಜಸ್ಸನ್ನು ತೇಜಸ್ಸಾಗಿ ಪರಿವರ್ತಿಸುವುದು.
(3) ವಿವೇಕಯುತಯೋಗಮಾರ್ಗ
– ವಿತರ್ಕಬಾಧನೇ ಪ್ರತಿಪಕ್ಷಭಾವನಮ್ (ಪಾತಂಜಲಯೋಗಸೂತ್ರ) : ನಾನು ಆಕರ್ಷಿತವಾಗಿರುವ ಈ ಸುಂದರ ದೇಹವಾದರೂ
ಏನೆಂದು? ಒಳಹೊಕ್ಕಿ ವಿಚಾರಮಾಡಿದರೆ - ಈ ದೇಹವೆಂದರೆ ಮೂಳೆ, ಮಾಂಸ, ರಕ್ತ, ಮಲ ಮತ್ತು ಮೂತ್ರ ಮುಂತಾದ
ಹೇಯಪದಾರ್ಥಗಳಿಗೆ ಚರ್ಮವೆಂಬ ಹೊದಿಕೆ, ಈ ಸತ್ಯ ತಿಳಿದು ಅನಿತ್ಯವಾದ ದೇಹದ ಮೇಲಿರುವ ಕಾಮಭಾವನೆ ತೊಲಗಿಸಿ,
ನಿತ್ಯವಾದ ವಸ್ತುವನ್ನು ಮನಸ್ಸಿನಲ್ಲಿ ಪದೇ ಪದೇ ಭಾವಿಸುವುದು. ಇದನ್ನೇ “ಏತನ್ಮಾಂಸವಸಾದಿವಿಕಾರಮ್"
ಮತ್ತು “ಮನಸಿ ವಿಚಿಂತಯ ವಾರಂವಾರಮ್”ಆಚಾರ್ಯರು ತಿಳಿಸಿರುವುದು.
(4) ಉತ್ಕೃಷ್ಟಚಿಂತನಮ್
ಎಂದು ಕಾಮವನ್ನು ನಿಯಂತ್ರಿಸುವುದು ಉತ್ತಮವಾದರೂ ಕಾಮಭಾವನೆಯಿಂದ ಅತೀತರಾಗುವುದು ಅತ್ಯುತ್ತಮ. ಅದನ್ನು
ಸಾಧಿಸಲು ನಮ್ಮ ಶಾಸ್ತ್ರಗಳು ಹಲವು ಮಾರ್ಗಗಳನ್ನು ಉಪದೇಶಿಸುತ್ತವೆ.
* ದೇಹೋ ದೇವಾಲಯಃ
(ಮೈತ್ರೇಯೋಪನಿಷತ್) ಎಂಬಂತೆ ದೇಹವನ್ನು ದೇವಾಲಯದಂತೆ ಕಾಣಬೇಕೇ ಹೊರತು party place ಎಂಬಂತೆ ಮೋಜುಮಸ್ತಿಗಾಗಲ್ಲ.
ಬದಲಾಗಿ, ಜೀವೋ ದೇವಃ ಸನಾತನಃ ಎಂಬುದನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಉದಾತ್ತ ತನೆಯನ್ನು ಪೋಷಿಸಬೇಕು.
* ಮಾತೃವತ್ ಪರದಾರೇಷು
(ಸುಭಾಷಿತಮ್) ಎಂಬಂತೆ ಪರಸ್ತ್ರೀಯರನ್ನುತಾಯಿಯಂತೆ ಭಾವಿಸುವುದು ಹಾಗೂ ಗೌರವವನ್ನು ಆಚರಣೆಯಲ್ಲಿ ತರಬೇಕು.
* ಯೋ ಭೂಮಾ ತತ್ಸುಖಮ್
(ಛಾಂದೋಗೋಪನಿಷತ್) ವಿಷಯಾನಂದದಿಂದ ದೊರೆಯುವ ಸುಖ ಅಲ್ಪವಾದದ್ದೆಂದು ಮನಗಂಡು ಭಜನಾನಂದ, ಧ್ಯಾನಾನಂದ
ಮುಂತಾದ ಸೂಕ್ಷ್ಮ ಆನಂದಗಳನ್ನು ಸವಿಯುವ ಪ್ರಯತ್ನ ಮಾಡಬೇಕು. ಆತ್ಮಾನಂದದ ಪರಿಪೂರ್ಣತೆಯನ್ನು ಪಡೆದು
ನಮ್ಮ ಸರ್ವಾನರ್ಥಗಳಿಗೆ ಇತಿಶ್ರೀ ಹಾಡಬೇಕು.
ಜನಪ್ರಿಯವಾಗಿರುವ
ವಾಲಿ-ಸುಗ್ರೀವರ ಕಥೆಯಲ್ಲಿ, ಅಧರ್ಮಿಯಾದ ವಾಲಿಯ ಬಳ ದೇವದತ್ತವಾದ ಹಾರವೊಂದಿದ್ದು, ಅದರ ಶಕ್ತಿಯಿಂದ
ಎದುರಾಳಿಯ ಶಕ್ತಿ ಕುಗ್ಗಿ ವಾಲಿ ಹೆಚ್ಚು ಬಲಿಷ್ಠನಾಗುತ್ತಿದ್ದ. ಎಷ್ಟೇ ಬಾರಿ ಸುಗ್ರೀವನೇ ಆಗಲಿ ಇನ್ಯಾರೇ
ಆಗಲಿ ವಾಲಿಯನ್ನು ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗದಿದ್ದದ್ದು, ಇದೇ ಕಾರಣದಿಂದ ಸೋತು ಹತಾಶನಾಗಿದ್ದ
ಸುಗ್ರೀವ, ಕೊನೆಗೆ ರಾಮನಲ್ಲಿ ಶರಣಾಗತನಾಗಿ ವಾಲಿವಧೆ ಮಾಡಿದ ಪ್ರಸಂಗವನ್ನು ನೆನಪುಮಾಡಿಕೊಳ್ಳುವುದು
ಅವಶ್ಯಕ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ, ಶತ್ರುರೂಪವಾದ ಕಾಮವನ್ನು ಸ್ವಶಕ್ತಿಯಿಂದ ಎದುರಿಸಿ
ಗೆಲ್ಲುವುದಷ್ಟು ಸುಲಭವಲ್ಲ. ಕಾಮದ ಕಾರಣ, ಪರಿಣಾಮ ಮತ್ತು ಪರಿಹಾರವನ್ನು ತಿಳಿದು, ಕಾಮರೂಪಶತ್ರುವನ್ನು
ಸಂಹರಿಸಿ (ಜಹಿ ಶತ್ರುಂ ಮಹಾಬಾಹೋ ಕಾಮರೂಪಮ್ ದುರಾಸದಮ್ ಭಗವದ್ಗೀತೆ) ಮೋಕ್ಷದೆಡೆಗೆ ಸಾಗಲು ರಾಮರೂಪಿ
ಭಗವಂತನನ್ನು ಆಶ್ರಯಿಸುವುದೇ ಮಾರ್ಗ ಭಜಗೋವಿಂದಮ್.
No comments:
Post a Comment